WELCOME TO NAMO BRIGADE SHAHABAD OFFICIAL WEBSITE

UNIVERSAL SOCIAL SECURITY SCHEME / ಸಾಮಾಜಿಕ ಭದ್ರತಾ ಯೋಜನೆಯ


ಮೋದಿ ಸರಕಾರದಿಂದ ಬಡವರಿಗಾಗಿ ಹೊಸ ಸಾಮಾಜಿಕ ಭದ್ರತಾ ಯೋಜನೆ


ಪ್ರಧಾನಿ ಮೋದಿ ನೇತೃತ್ವದ ಸರಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಭದ್ರತಾ ಯೋಜನೆಯ ಪ್ರಸ್ತಾವವನ್ನು ಕಾರ್ಮಿಕ ಸಚಿವಾಲಯ ರೂಪಿಸಿದೆ. ಜಗತ್ತಿನ ಬಡ ರಾಷ್ಟ್ರಗಳ ಪೈಕಿ ಐದನೇ ಸ್ಥಾನದಲ್ಲಿರುವ ಭಾರತದ ಬಡವರಿಗಾಗಿ ಈ ಯೋಜನೆ ಸಿದ್ಧವಾಗುತ್ತಿದೆ. ಈ ಯೋಜನೆಗಾಗಿ 1.2 ಲಕ್ಷ ಕೋಟಿ ರುಪಾಯಿ ಮೀಸಲಿಡಲಾಗಿದೆ.

ಅಸಂಘಟಿತ ವಲಯದ ಹಾಗೂ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಬಾರದವರಿಗೆ ಇದರಿಂದ ಅನುಕೂಲವಾಗಲಿದೆ. ಭಾರತದಲ್ಲಿನ ಒಟ್ಟು ಶ್ರಮಿಕ ವರ್ಗದ ಪೈಕಿ ಶೇಕಡಾ ತೊಂಬತ್ತರಷ್ಟು ಮಂದಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ ಮತ್ತು ಆ ಪೈಕಿ ಬಹುತೇಕ ಮಂದಿ ಕನಿಷ್ಠ ವೇತನ ಕೂಡ ದೊರೆಯುತ್ತಿಲ್ಲ. ಈಗಿನ ಪ್ರಸ್ತಾವವು ದೊಡ್ಡ ಮಟ್ಟದ ಯೋಜನೆ ಆಗಿದ್ದು, ಪ್ರತಿಯೊಬ್ಬರಿಗಾಗಿ ರೂಪಿಸಲಾಗಿದೆ. 
ಈ ಯೋಜನೆಯನ್ನು ಮೂರು ವಿಭಾಗ ಮಾಡಲಾಗಿದೆ. ಬಡವರಿಗಾಗಿ ಶೇಕಡಾ ಇಪ್ಪತ್ತರಷ್ಟು, ಅವರಿಗೆ ಸರಕಾರದಿಂದ ಪಾವತಿಸಲಾಗುವುದು; ಇನ್ನು ತಾವಾಗಿಯೇ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವವರು ಮತ್ತು ಸಂಘಟಿತ ವಲಯದ ಕಾರ್ಮಿಕರು ನಿರ್ದಿಷ್ಟ ಮೊತ್ತದ ಆದಾಯವನ್ನು ಯೋಜನೆಗಾಗಿಯೇ ಎತ್ತಿಡುವವರು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಈಗಾಗಲೇ ಕಾರ್ಮಿಕ ಸಚಿವಾಲಯದಿಂದ ವಿತ್ತ ಸಚಿವಾಲಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲದ ಲೆಕ್ಕಾಚಾರ ನಡೆಯುತ್ತಿದೆ. ಈ ಯೋಜನೆ ಅಡಿ ಎರಡು ರೀತಿ ಬರುತ್ತದೆ. ಮೊದಲನೆಯದು ಕಡ್ಡಾಯ ಪಿಂಚಣಿ, ಇನ್ಷೂರೆನ್ಸ್ (ಸಾವು ಹಾಗೂ ಅಂಗವೈಕಲ್ಯ ಎರಡಕ್ಕೂ) ಮತ್ತು ಹೆರಿಗೆಗೆ ಅನ್ವಯ ಹಾಗೂ ಎರಡನೆಯದು ಐಚ್ಛಿಕ ಮೆಡಿಕಲ್, ಅನಾರೋಗ್ಯ ಮತ್ತು ನಿರುದ್ಯೋಗಕ್ಕೆ ಅನ್ವಯಿಸುತ್ತದೆ.

ಸಂಘಟಿತ ವಲಯದಲ್ಲಿ ಉದ್ಯೋಗದಾತರು ಮೂಲವೇತನದಲ್ಲಿ ಭವಿಷ್ಯ ನಿಧಿ ಮೂಲದಲ್ಲಿ ಶೇ ಇಪ್ಪತ್ತೈದರಷ್ಟು ಕಡಿತ ಮಾಡುತ್ತಾರೆ. ಹಲವು ಕಂಪೆನಿಗಳಲ್ಲಿ ಉದ್ಯೋಗಿಯ ಕೊಡುಗೆ ಜತೆಗೆ ಕಂಪೆನಿಯೂ ನೀಡುತ್ತದೆ. ಆ ಮೊತ್ತ ಪಿಪಿಎಫ್ ಖಾತೆಗೆ ಹೋಗುತ್ತದೆ. ಪ್ರತಿ ಉದ್ಯೋಗಿಗೂ ಪಿಪಿಎಫ್ ಖಾತೆ ಇರುತ್ತದೆ. ಉದ್ಯೋಗ ಬದಲಾವಣೆ ಮಾಡಿದರೂ ಆ ಖಾತೆ ಸಂಖ್ಯೆಯು ಬದಲಾವಣೆ ಆಗುವುದಿಲ್ಲ. ಸರಕಾರದ ಈ ಹೊಸ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೂ ಅದೇ ರೀತಿಯ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ.


Share:

No comments:

Post a Comment

Recent Posts

For Advertisement contact 9008814254