'ಕೈ' ಸಮಾವೇಶ: ಬಿಜೆಪಿ ಚಹಾ ಮಾರಾಟ!
ಕಲಬುರ್ಗಿ: ನಗರದಲ್ಲಿ ಶನಿವಾರ ನಡೆದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನಾ ಸಮಾವೇಶದಲ್ಲಿ ಸಾರ್ವಜನಿಕರಿಗೆ ನರೇಂದ್ರ ಮೋದಿ ಹೆಸರಿನಲ್ಲಿ ಚಹಾ ವಿತರಿಸುವ ಮೂಲಕ ಬಿಜೆಪಿ ಯುವ ಮೋಚಾ೯ ಕಾಯ೯ಕತ೯ರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ಧ ಯುವ ಮೋಚಾ೯ ಅಧ್ಯಕ್ಷ ಪರಶುರಾಮ ನಸಲವಾಯಿ ಹಾಗೂ ಉಪಾಧ್ಯಕ್ಷ ಬಸವರಾಜ ಮದ್ರಿಕಿ ಅವರನ್ನು ಬಂಧಿಸಿದ ಬ್ರಹ್ಮಪುರ ಪೋಲಿಸರು ನಂತರ ಬಿಡುಗಡೆ ಮಾಡಿದರು.
ಸುನಿಲ್ ಮಹಾಗಾಂಕರ್, ನಾಗರಾಜ ಮಹಾಗಾಂಕರ್, ಬಸವರಾಜ ರಾಠೋಡ, ರಾಜಶೇಖರ ಬೋಳೆಮಾಡ ಇದ್ದರು.
No comments:
Post a Comment