WELCOME TO NAMO BRIGADE SHAHABAD OFFICIAL WEBSITE

ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಪ್ರಧಾನಿ ಮೋದಿ ಕಹಳೆ

ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಪ್ರಧಾನಿ ಮೋದಿ ಕಹಳೆ

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ಜನರನ್ನು ಸೆಳೆಯಲು ಬಿಜೆಪಿಯ ಪ್ರಮುಖ ಅಸ್ತ್ರವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಪ್ರಚಾರದ ಅಖಾಡಕ್ಕೆ ಪೂರ್ಣವಾಗಿ ಇಳಿದಿಲ್ಲ. ಆದರೆ, ದೂರದ ದೆಹಲಿಯಲ್ಲಿಯೇ ಕುಳಿತು ಇಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.


ಗುರುವಾರ ನಮೋ ಆಪ್ ಮೂಲಕ ರಾಜ್ಯದ ಬಿಜೆಪಿ ಕಾರ್ಯಕರ್ತರ ಜತೆ ಸಂವಾದ ನಡೆಸಿದ ಮೋದಿ ಅವರು, ಅಭಿವೃದ್ಧಿ ಮಂತ್ರ ಚುನಾವಣಾ ಪ್ರಚಾರದ ಮೂಲ ಧ್ಯೇಯವಾಗಿರಬೇಕು ಎಂದು ಹೇಳಿದರು.
'ಅಭಿವೃದ್ಧಿ, ತ್ವರಿತ ಅಭಿವೃದ್ಧಿ ಮತ್ತು ಸಮಗ್ರ ಅಭಿವೃದ್ಧಿ'- ಇವು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಪಕ್ಷದ ಮೂರು ಅಂಶಗಳ ಕಾರ್ಯಸೂಚಿ.
ದೇಶದ ರಾಜಕೀಯವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ಅದಕ್ಕೆ ತನ್ನ ಕೆಲಸಗಳ ಕುರಿತು ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ಆರೋಪಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಮೂಲಸೌಕರ್ಯ ವಲಯ, ನವೀಕರಿಸಬಹುದಾದ ಇಂಧನ, ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಎಲ್‌ಪಿಜಿ ಸಂಪರ್ಕ ಪೂರೈಕೆ ಮುಂತಾದವುಗಳಲ್ಲಿನ ಪ್ರಗತಿ ಹೋಲಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರಕ್ಕಿಂತ ಎಲ್ಲ ವಿಚಾರಗಳಲ್ಲಿಯೂ ಸಾಕಷ್ಟು ಮುಂದಿದೆ. ಕೃಷಿ ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯಗಳ ಬಗ್ಗೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಯಾವುದೇ ಗಮನ ಹರಿಸಿಲ್ಲ ಎಂದು ದೂರಿದರು.

ಸಮಾಜದ ಬಡ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಕುರಿತು ಅವರು ಪ್ರಸ್ತಾಪಿಸಿದರು. ಬಡವರ ಕೈಗಳನ್ನು ನಾವು ಬಲಪಡಿಸಿದಾಗ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿಸಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಅವರ ಉನ್ನತಿಗಾಗಿ ಎನ್‌ಡಿಎ ಸರ್ಕಾರ ಬದ್ಧವಾಗಿದೆ.
ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಅವರು ಕೇವಲ ವಂಶಪಾರಂಪರ್ಯ ರಾಜಕೀಯ, ಸುಳ್ಳುಗಳನ್ನು ಹರಡುವುದು ಮತ್ತು ಜಾತಿ ಆಧಾರದಲ್ಲಿ ಜನರನ್ನು ವಿಭಜಿಸುವುದನ್ನು ಮಾತ್ರ ಮಾಡುತ್ತಿದ್ದಾರೆ. ಇದೇ ವೇಳೆ ಬಿಜೆಪಿ 'ಒಂದೇ ಭಾರತ, ಶ್ರೇಷ್ಠ ಭಾರತ' ಮತ್ತು 'ಸಬ್‌ ಕಾ ಸಾಥ್‌, ಸಬ್ ಕಾ ವಿಕಾಸ್' ಎಂಬ ಮಂತ್ರಗಳನ್ನು ನಂಬಿಕೊಂಡಿದೆ ಎಂದು ತಿಳಿಸಿದರು.


ಕರ್ನಾಟಕದಲ್ಲಿ ತಾನು ಚುನಾವಣೆ ಸಮೀಪಿಸುತ್ತಿದ್ದಂತೆಯೇ ತಾನು ಗೆಲ್ಲುವುದಿಲ್ಲ ಎಂಬುದನ್ನು ಅರಿತುಕೊಂಡಿರುವ ಕಾಂಗ್ರೆಸ್, ಈ ಮೂಲಕ ಅತಂತ್ರ ವಿಧಾನಸಭೆಯ ಸೃಷ್ಟಿಗಾಗಿ ಸುಳ್ಳುಗಳನ್ನು ಹಬ್ಬಿಸುತ್ತಿದೆ. ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯದ ಬಗ್ಗೆ ಕರ್ನಾಟಕದ ಜನರಿಗೆ ತಿಳಿದಿದೆ. ಅವರನ್ನು ಆ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದರು.

ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಅವರು ಸೂಚಿಸಿದರು. ಬಳಿಕ, ಪಕ್ಷದ ಶಕ್ತಿಯನ್ನು ವೃದ್ಧಿಸುವ, ರೈತರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

Share:

Related Posts:

No comments:

Post a Comment

For Advertisement contact 9008814254