ಶಹಾಬಾದ : ನಗರದ ಮರಗೋಳ ಕಾಲೇಜಿನ ಹಿಂಭಾಗದ ಬೀರಲಿಂಗೇಶ್ವರ್ ಆಶ್ರಯ ಕಾಲೋನಿಯ ಬಡ ಮಕ್ಕಳಿಗೆ ನಮೋ ಬ್ರಿಗೇಡ್ ಶಹಾಬಾದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರದ ರೇವು ನಾಯಕ ಬೇಳಮಗಿ, ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತ ದೇಶ ಕಂಡ ಅಪರೂಪದ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಎಂದು ಹೇಳಿದರು.
ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರದ ಬಸವರಾಜ ಮದ್ರಿಕಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಅಟಲಜೀ ಅವರು ಅಭಿವೃದ್ಧಿಯೇ ನನ್ನ ಗುರಿ ಎಂದು ಪ್ರಪಂಚಕ್ಕೆ ತೋರಿಸಿಟ್ಟ ಮಹಾನ್ ವ್ಯಕ್ತಿ ಎಂದು ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ನಮೋ ಬ್ರಿಗೇಡ್ ಶಹಾಬಾದನ ಅಧ್ಯಕ್ಷರದ ರಾಡನಿ ಎಲಿಜರ್, ನದಿ ಜೋಡಣೆ ಹಾಗೂ ರಸ್ತೆ ಜೋಡಣೆ ಅಟಲಜೀ ಅವರು ದೇಶಕೆ ಕೊಟಂತ ಮಹತ್ವದ ಕೊಡಿಗೆಗಳಾಗಿವೆ ಯಂದು ಹೇಳಿದರು.